[Advaita-l] Sri SSS's old Kannada article on 'Brahma Darshana' - with English summary

Raghav Kumar Dwivedula raghavkumar00 at gmail.com
Sun Oct 5 09:29:17 EDT 2025


Dear Subbu ji
It’s surprising to hear SSSS ji say - (as my Kannada knowledge is limited,
I request a better translation from more knowledgeable members but the
drift of what he is saying validates some important points of contention
maintained by MSA (mainstream advaita))

ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಧ್ಯಾನಿಸಿದಾಗ ಅದು ಪರಮಾತ್ಮ ರೂಪವನ್ನು
ಹೊಂದುವದು ; ಆಗ ದೊರಕುವ ವಿಲಕ್ಷಣಾನುಭವವೇ ಆತ್ಮದರ್ಶನವು.

When the mind is concentrated and meditated upon, it takes on the form
of the Supreme Soul; the unique experience (ವಿಲಕ್ಷಣಾನುಭವವೇ) that is
then attained is self-realization.

And also SSSS ji validates what is pretty much called the mahāvākya vṛtti
jñānam in PSA -

If a mirror is cleaned, or if turbulent water comes to a calm stop,

Just as the reflection of the sunrise falls in it, so too, if the mind
is withdrawn from external things and drawn inward…

ಏಕಾಗ್ರವಾಗಿಸಿ ಆತ್ಮನನ್ನು ಕಾಣುವ ಪ್ರಯತ್ನವನ್ನು ಮಾಡಿದರೆ ಆ ಪರಮಾತ್ಮನ ಪ್ರತಿಚ್ಛಾಯೆಯು
ಮನಸ್ಸಿನಲ್ಲಿ ಬೀಳುವದು.

*…If you concentrate and make an effort to see the Self, the *
*image (ಪ್ರತಿಚ್ಛಾಯೆಯು) of that Supreme Soul will fall into your
mind.(ಮನಸ್ಸಿನಲ್ಲಿ ಬೀಳುವದು.)*


Om

Raghav










On Sun, 5 Oct 2025 at 12:59 PM, V Subrahmanian via Advaita-l <
advaita-l at lists.advaita-vedanta.org> wrote:

> Here’s a *concise bullet-point version* of the article’s substance:
>
>    -
>
>    *Question:* Can Paramātman be seen in His true form?
>    -
>
>    *Purāṇic accounts:* Devotees see chosen deity-forms; avatāras like Rāma,
>    Kṛṣṇa are assumed for the world’s welfare. These are temporary, māyic
> forms.
>    -
>
>    *Upaniṣadic teaching (Muṇḍaka 3.1.8):*
>    -
>
>       Paramātman has no form, color, or qualities.
>       -
>
>       He cannot be grasped by eyes, speech, mind, senses, ritual, or
>       austerity.
>       -
>
>    *Reason:* He is not an external object to be acquired; He is
>    ever-present, the innermost Self.
>    -
>
>    *Nature of Paramātman:* The universal Self, the consciousness that
>    illumines mind and senses.
>    -
>
>    *Obstacle:* The mind is impure, restless, turned outward by likes and
>    dislikes, so it cannot reveal Him.
>    -
>
>    *Method:*
>    -
>
>       Withdraw the mind from externals, purify and steady it.
>       -
>
>       In deep concentration, the mind reflects Paramātman like a clean
>       mirror or calm water reflects light.
>       -
>
>       The mind then loses its individuality and merges in Paramātman.
>       -
>
>    *Result:*
>    -
>
>       Paramātman is not objectified but realized directly.
>       -
>
>       This unique inner experience is true *Ātma-darśana* (vision of the
>       Self).
>
>       Here is the full original article:
>
> Please give an English substance of this:
>
> ಅಕ್ಟೋಬರ್ 2025 ರ "ಅಧ್ಯಾತ್ಮ ಪ್ರಕಾಶ" ಮಾಸಪತ್ರಿಕೆಯಲ್ಲಿ ಬಂದಿರುವ  'ಪರಮಾತ್ಮನ ದರ್ಶನ'
>  ಎಂಬ ಲೇಖನ.
> ಲೇಖಕರು :  ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳವರು, ಅಧ್ಯಾತ್ಮ ಪ್ರಕಾಶ
> ಕಾರ್ಯಾಲಯ, ಹೊಳೆನರಸೀಪುರ / ಬೆಂಗಳೂರು.
>
> ಪರಮಾತ್ಮನು ಇರುವ ಯಥಾರ್ಥರೂಪದಿಂದ ಆತನನ್ನು ಕಾಣುವದು ಶಕ್ಯವೆ ?  ಭಕ್ತರು ತಮ್ಮ
> ಇಷ್ಟದೇವತೆಯ ರೂಪದಿಂದ ಆತನನ್ನು ಕಣ್ಣಾರೆ ಕಂಡು ಅನುಗ್ರಹವನ್ನು ಪಡೆದರೆಂದು ಪುರಾಣಗಳಲ್ಲಿ
> ವರ್ಣಿತವಾಗಿದೆ. ಆದರೆ ಆ ರೂಪವು ಭಗವಂತನು ಭಕ್ತರನ್ನು ಅನುಗ್ರಹಿಸುವದಕ್ಕೆಂದು ಸ್ವೀಕರಿಸಿದ
> ತಾತ್ಕಾಲಿಕರೂಪವು.  ಹೀಗೆಯೇ ಅಧರ್ಮವು ಹೆಚ್ಚಿ ಧರ್ಮವು ಕುಂದಿರುವಾಗ ಧರ್ಮೋದ್ಧಾರಕ್ಕಾಗಿ
> ರಾಮಕೃಷ್ಣಾದಿರೂಪಗಳಿಂದ ಭಗವಂತನು ಅವತರಿಸಿದನೆಂದು ಇತಿಹಾಸಗಳಲ್ಲಿ ಬರೆದಿದೆ ; ಅದೂ
> ಭಗವಂತನು ಲೋಕಾನುಗ್ರಹಕ್ಕಾಗಿ ಮಾಯೆಯಿಂದ ತೆಗೆದುಕೊಂಡ ತಾತ್ಕಾಲಿಕರೂಪವು. ಪರಮಾತ್ಮನು
> ಎಂದೆಂದಿಗೂ ಇದ್ದುಕೊಂಡಿರುವ ರೂಪದಿಂದ ಆತನನ್ನು ಕಾಣುವದು ಸಾಧ್ಯವೆ ?  ಈ ಪ್ರಶ್ನೆಗೆ
> ಉಪನಿಷತ್ತಿನಲ್ಲಿ ಹೀಗೆಂದು ಉತ್ತರವನ್ನು ಕೊಟ್ಟಿರುತ್ತದೆ :
>
> ನ ಚಕ್ಷುಷಾ ಗೃಹ್ಯತೇ ನಾಪಿ ವಾಚಾ ನಾನ್ಯೈರ್ದೇವೈಸ್ತಪಸಾ ಕರ್ಮಣಾ ಚ | ಜ್ಞಾನಪ್ರಸಾದೇನ
> ವಿಶುದ್ಧಸತ್ತ್ವಸ್ತತಸ್ತುತಂ ಪಶ್ಯತೇ ನಿಷ್ಕಲಂ ಧ್ಯಾಯಮಾನಃ II
> ಮುಂ. 3-1-8
>
> ಪರಮಾತ್ಮನ ನಿತ್ಯಸ್ವರೂಪಕ್ಕೆ ಯಾವ ಆಕಾರವಾಗಲಿ ಬಣ್ಣವಾಗಲಿ ಇರುವದಿಲ್ಲ. ಆದ್ದರಿಂದ
> ಅವನನ್ನು ಕಣ್ಣಿನಿಂದ ಕಾಣುವದು ಆಗುವಂತಿಲ್ಲ. ಅವನಲ್ಲಿ ಜಾತಿ, ದ್ರವ್ಯ, ಗುಣ, ಕ್ರಿಯೆ,
> ಸಂಬಂಧ - ಎಂಬ ಯಾವ ವಿಶೇಷಗಳೂ ಇರುವದಿಲ್ಲ ;  ಆದ್ದರಿಂದ ಅವನು 'ಇಂಥವನು' ಎಂದು ಯಾವ
> ಮಾತಿನಿಂದಲೂ ತಿಳಿಸುವದಕ್ಕೆ ಆಗುವಂತಿಲ್ಲ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಯಾವದೂ
> ಇಲ್ಲದ್ದರಿಂದ ಆತನನ್ನು ಶೋತೃ, ತ್ವಕ್ಕು, ಕಣ್ಣು, ಜಿಹ್ವ, ಘ್ರಾಣ - ಎಂಬ
> ಜ್ಞಾನೇಂದ್ರಿಯಗಳಿಂದಲೂ ಅರಿಯುವದಕ್ಕೆ ಆಗುವಂತಿಲ್ಲ ;  ಇದೇ ಕಾರಣದಿಂದ ಆತನನ್ನು
> ಮನಸ್ಸಿನಿಂದ ಚಿಂತಿಸಿಕೊಳ್ಳುವದಕ್ಕೂ ಬರುವಂತಿಲ್ಲ. ವೇದದಲ್ಲಿ ಹೇಳಿರುವ ಅಗ್ನಿಹೋತ್ರವೇ
> ಮುಂತಾದ ಕರ್ಮಗಳಿಂದ ಸ್ವರ್ಗಾದಿಗಳನ್ನು ಕೂಡ ಪಡೆದುಕೊಳ್ಳಬಹುದೆಂದು ಶಾಸ್ತ್ರಪ್ರಮಾಣವಿದೆ.
> ಆದರೆ
> ಪರಮಾತ್ಮನ ಪರಮಾರ್ಥ ರೂಪವನ್ನು ಯಾವ ಕರ್ಮದಿಂದಲೂ ಪಡೆಯುವದಕ್ಕೆ ಆಗುವಂತಿಲ್ಲ. ಏಕೆಂದರೆ
> ಅವನು ಸಾಧಕರಿಂದ ಬೇರೆಯಾಗಿದ್ದು ಪಡೆಯುವದಕ್ಕೆ ಯೋಗ್ಯವಾಗಿ ದೂರದಲ್ಲಿರುವ ವಸ್ತುವಲ್ಲ.
> ತಪಸ್ಸಿನಿಂದ ಅನೇಕ ಮಹಾಫಲಗಳು ಸಿದ್ಧಿಸುವವೆಂದು ಶಾಸ್ತ್ರಪ್ರಸಿದ್ಧಿಯಿದೆ. ಆದರೆ ನಿತ್ಯ
> ಸಿದ್ದನಾಗಿರುವ ಪರಮಾತ್ಮನನ್ನು ತಪಸ್ಸಿನಿಂದಲೂ ಕಂಡುಕೊಳ್ಳುವದಕ್ಕೆ ಆಗುವಂತಿಲ್ಲ.
> ಯಜ್ಞದಾನತಪಸ್ಸುಗಳೆಂಬ ಶಾಸ್ತ್ರಕರ್ಮಗಳಿಗೆ ಫಲವೇ ಇಲ್ಲವೆಂದಲ್ಲ ; ಅವುಗಳಿಂದ ನೇರಾಗಿ
> ಪರಮಾತ್ಮನನ್ನು ಕಂಡುಕೊಳ್ಳುವದು ಮಾತ್ರ ಎಂದಿಗೂ ಆಗಲಾರದು.
>
> ಹಾಗಾದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿರುವ ಪರಮಾತ್ಮದರ್ಶನಸಾಧನವು ಯಾವದು ? ಎಂದು ಯಾರಾದರೂ
> ಕೇಳಬಹುದು. ಪರಮಾತ್ಮನೆಂದರೆ ನಮ್ಮೆಲ್ಲರಲ್ಲಿಯೂ ತೀರಾ ಒಳಗಿರುವ ನಿಜವಾದ ಸರ್ವಾತ್ಮನು.
> ನಾವು ತಪ್ಪು ತಿಳಿವಳಿಕೆಯಿಂದ 'ನಾನು', 'ನಾನು' - ಎಂದು ಭಾವಿಸಿಕೊಂಡಿರುವ
> ಮಿಥ್ಯಾತ್ಮರೆಲ್ಲರಿಗಿಂತಲೂ ಬೇರೆಯಾಗಿ ಇವರೆಲ್ಲರನ್ನೂ ವ್ಯಾಪಿಸಿಕೊಂಡಿರುವದರಿಂದ ಅವನಿಗೆ
> 'ಪರಮಾತ್ಮನು'  ಎಂದು ಹೆಸರು. ಆ ಪರಮಾತ್ಮನ ಚೈತನ್ಯರೂಪವಾದ ಅನುಭವದಿಂದಲೇ ನಾವು ಮನಸ್ಸನ್ನೂ
> ಇಂದ್ರಿಯಗಳನ್ನೂ ಅರಿತುಕೊಳ್ಳುತ್ತಿರುವೆವು. ಆತನ ಪ್ರಭಾವದಿಂದಲೇ ಮನಸ್ಸು ಇಂದ್ರಿಯಗಳೂ
> ತಮ್ಮ ತಮ್ಮ ವಿಷಯಗಳನ್ನು ಬೆಳಗಿ ತೋರಿಸುತ್ತಿರುವವು.
>
> ನಮ್ಮ ಅಂತಃಕರಣವು ಈಗ್ಗೆ ಹೊರಗಿನ ವಿಷಯಗಳ ರಾಗದ್ವೇಷಗಳಿಂದ
>  ಕಲ್ಮಷಯುಕ್ತವಾಗಿಬಿಟ್ಟಿರುತ್ತದೆ ; ಆದ್ದರಿಂದಲೇ ಅದಕ್ಕೆ ಸಂಬಂಧಪಟ್ಟಿರುವ ವಿಷಯಗಳನ್ನು
> ತಿಳಿಯಿಸುವ ಶಕ್ತಿಯಿದ್ದರೂ ತೀರಾ ಹತ್ತಿರವಿರುವ ಪರಮಾತ್ಮನನ್ನು ಕೂಡ ತಿಳಿಯಿಸಿಕೊಡುವ
> ಶಕ್ತಿ ಇರುವದಿಲ್ಲ. ಕನ್ನಡಿಯನ್ನು ಸ್ವಚ್ಛಗೊಳಿಸಿದರೆ, ಅಥವಾ ಚಂಚಲವಾಗಿರುವ ನೀರು
> ಸ್ತಿಮಿತವಾಗಿ ನಿಲುಗಡೆಯನ್ನು ಹೊಂದಿದರೆ, ಅದರಲ್ಲಿ ಹೇಗೆ ಸೂರ್ಯಾದಿಗಳ ಪ್ರತಿಬಿಂಬವು
> ಬೀಳುವದೋ ಹಾಗೆಯೇ ಮನಸ್ಸನ್ನು ಹೊರಗಿನ ವಿಷಯಗಳಿಂದ ಹಿಮ್ಮೆಟ್ಟಿಸಿ ಒಳಕ್ಕೆ ಹಾಯಿಸಿದರೆ,
> ಏಕಾಗ್ರವಾಗಿಸಿ ಆತ್ಮನನ್ನು ಕಾಣುವ ಪ್ರಯತ್ನವನ್ನು ಮಾಡಿದರೆ ಆ ಪರಮಾತ್ಮನ ಪ್ರತಿಚ್ಛಾಯೆಯು
> ಮನಸ್ಸಿನಲ್ಲಿ ಬೀಳುವದು. ಆಗ ಆ ಮನಸ್ಸು ತನ್ನ ಮನಸ್ತ್ವವನ್ನು ಬಿಟ್ಟು ಪರಮಾತ್ಮನಲ್ಲಿಯೇ
> ಮುಳುಗಿ ಪರಮಾತ್ಮನೇ ಆಗಿಬಿಡುವದು. ಈ ಧ್ಯಾನಯೋಗದಿಂದ ಪರಮಾತ್ಮನನ್ನು ಕಂಡುಕೊಳ್ಳಬಹುದು.
>
> ಪರಮಾತ್ಮದರ್ಶನವೆಂದರೆ ಯಾವುದಾದರೊಂದು ಕರಣದಿಂದ ಆತನನ್ನು ವಿಷಯೀಕರಿಸಿಕೊಂಡು ಅರಿಯುವದಲ್ಲ
> ; ಎಲ್ಲವನ್ನೂ ವ್ಯಾಪಿಸಿಕೊಂಡಿರುವ ನಿರವಯವನಾದ ಆ ಸರ್ವಸಾಕ್ಷಿಯನ್ನು ಹೇಗೆ, ಏತರಿಂದತಾನೆ,
> ಅರಿಯಲಾದೀತು ? ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಧ್ಯಾನಿಸಿದಾಗ ಅದು ಪರಮಾತ್ಮ ರೂಪವನ್ನು
> ಹೊಂದುವದು ; ಆಗ ದೊರಕುವ ವಿಲಕ್ಷಣಾನುಭವವೇ ಆತ್ಮದರ್ಶನವು.
> _______________________________________________
> Archives: https://lists.advaita-vedanta.org/archives/advaita-l/
>
> To unsubscribe or change your options:
> https://lists.advaita-vedanta.org/cgi-bin/listinfo/advaita-l
>
> For assistance, contact:
> listmaster at advaita-vedanta.org
>


More information about the Advaita-l mailing list