[Advaita-l] [advaitin] Sri SSS's old Kannada article on 'Brahma Darshana' - with English summary
H S Chandramouli
hschandramouli at gmail.com
Sun Oct 5 08:12:07 EDT 2025
Namaste.
On Sun, Oct 5, 2025 at 12:59 PM V Subrahmanian <v.subrahmanian at gmail.com>
wrote
// This unique inner experience is true *Ātma-darśana* (vision of the Self)
//.
Seeking a few clarifications from the perspective of Sri SSS.
Does this state correspond to the state of mOksha (no rebirth ) covered by
Mundaka 2-2-9
// भिद्यते हृदयग्रन्थिश्छिद्यन्ते सर्वसंशयाः ।
क्षीयन्ते चास्य कर्माणि तस्मिन्दृष्टे परावरे ॥ ९ ॥ //
// bhidyate hRRidayagranthishChidyante sarvasaMshayAH |
kShIyante chAsya karmANi tasmindRRiShTe parAvare || 9 || //.
If yes, what is the role of mahAvAkya in this sAdhana?
If no, what is the benefit ( phala ) obtained through this sAdhana?.
Regards
On Sun, Oct 5, 2025 at 12:59 PM V Subrahmanian <v.subrahmanian at gmail.com>
wrote:
> Here’s a *concise bullet-point version* of the article’s substance:
>
> -
>
> *Question:* Can Paramātman be seen in His true form?
> -
>
> *Purāṇic accounts:* Devotees see chosen deity-forms; avatāras like
> Rāma, Kṛṣṇa are assumed for the world’s welfare. These are temporary, māyic
> forms.
> -
>
> *Upaniṣadic teaching (Muṇḍaka 3.1.8):*
> -
>
> Paramātman has no form, color, or qualities.
> -
>
> He cannot be grasped by eyes, speech, mind, senses, ritual, or
> austerity.
> -
>
> *Reason:* He is not an external object to be acquired; He is
> ever-present, the innermost Self.
> -
>
> *Nature of Paramātman:* The universal Self, the consciousness that
> illumines mind and senses.
> -
>
> *Obstacle:* The mind is impure, restless, turned outward by likes and
> dislikes, so it cannot reveal Him.
> -
>
> *Method:*
> -
>
> Withdraw the mind from externals, purify and steady it.
> -
>
> In deep concentration, the mind reflects Paramātman like a clean
> mirror or calm water reflects light.
> -
>
> The mind then loses its individuality and merges in Paramātman.
> -
>
> *Result:*
> -
>
> Paramātman is not objectified but realized directly.
> -
>
> This unique inner experience is true *Ātma-darśana* (vision of the
> Self).
>
> Here is the full original article:
>
> Please give an English substance of this:
>
> ಅಕ್ಟೋಬರ್ 2025 ರ "ಅಧ್ಯಾತ್ಮ ಪ್ರಕಾಶ" ಮಾಸಪತ್ರಿಕೆಯಲ್ಲಿ ಬಂದಿರುವ 'ಪರಮಾತ್ಮನ
> ದರ್ಶನ' ಎಂಬ ಲೇಖನ.
> ಲೇಖಕರು : ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳವರು, ಅಧ್ಯಾತ್ಮ ಪ್ರಕಾಶ
> ಕಾರ್ಯಾಲಯ, ಹೊಳೆನರಸೀಪುರ / ಬೆಂಗಳೂರು.
>
> ಪರಮಾತ್ಮನು ಇರುವ ಯಥಾರ್ಥರೂಪದಿಂದ ಆತನನ್ನು ಕಾಣುವದು ಶಕ್ಯವೆ ? ಭಕ್ತರು ತಮ್ಮ
> ಇಷ್ಟದೇವತೆಯ ರೂಪದಿಂದ ಆತನನ್ನು ಕಣ್ಣಾರೆ ಕಂಡು ಅನುಗ್ರಹವನ್ನು ಪಡೆದರೆಂದು ಪುರಾಣಗಳಲ್ಲಿ
> ವರ್ಣಿತವಾಗಿದೆ. ಆದರೆ ಆ ರೂಪವು ಭಗವಂತನು ಭಕ್ತರನ್ನು ಅನುಗ್ರಹಿಸುವದಕ್ಕೆಂದು ಸ್ವೀಕರಿಸಿದ
> ತಾತ್ಕಾಲಿಕರೂಪವು. ಹೀಗೆಯೇ ಅಧರ್ಮವು ಹೆಚ್ಚಿ ಧರ್ಮವು ಕುಂದಿರುವಾಗ ಧರ್ಮೋದ್ಧಾರಕ್ಕಾಗಿ
> ರಾಮಕೃಷ್ಣಾದಿರೂಪಗಳಿಂದ ಭಗವಂತನು ಅವತರಿಸಿದನೆಂದು ಇತಿಹಾಸಗಳಲ್ಲಿ ಬರೆದಿದೆ ; ಅದೂ
> ಭಗವಂತನು ಲೋಕಾನುಗ್ರಹಕ್ಕಾಗಿ ಮಾಯೆಯಿಂದ ತೆಗೆದುಕೊಂಡ ತಾತ್ಕಾಲಿಕರೂಪವು. ಪರಮಾತ್ಮನು
> ಎಂದೆಂದಿಗೂ ಇದ್ದುಕೊಂಡಿರುವ ರೂಪದಿಂದ ಆತನನ್ನು ಕಾಣುವದು ಸಾಧ್ಯವೆ ? ಈ ಪ್ರಶ್ನೆಗೆ
> ಉಪನಿಷತ್ತಿನಲ್ಲಿ ಹೀಗೆಂದು ಉತ್ತರವನ್ನು ಕೊಟ್ಟಿರುತ್ತದೆ :
>
> ನ ಚಕ್ಷುಷಾ ಗೃಹ್ಯತೇ ನಾಪಿ ವಾಚಾ ನಾನ್ಯೈರ್ದೇವೈಸ್ತಪಸಾ ಕರ್ಮಣಾ ಚ | ಜ್ಞಾನಪ್ರಸಾದೇನ
> ವಿಶುದ್ಧಸತ್ತ್ವಸ್ತತಸ್ತುತಂ ಪಶ್ಯತೇ ನಿಷ್ಕಲಂ ಧ್ಯಾಯಮಾನಃ II
> ಮುಂ. 3-1-8
>
> ಪರಮಾತ್ಮನ ನಿತ್ಯಸ್ವರೂಪಕ್ಕೆ ಯಾವ ಆಕಾರವಾಗಲಿ ಬಣ್ಣವಾಗಲಿ ಇರುವದಿಲ್ಲ. ಆದ್ದರಿಂದ
> ಅವನನ್ನು ಕಣ್ಣಿನಿಂದ ಕಾಣುವದು ಆಗುವಂತಿಲ್ಲ. ಅವನಲ್ಲಿ ಜಾತಿ, ದ್ರವ್ಯ, ಗುಣ, ಕ್ರಿಯೆ,
> ಸಂಬಂಧ - ಎಂಬ ಯಾವ ವಿಶೇಷಗಳೂ ಇರುವದಿಲ್ಲ ; ಆದ್ದರಿಂದ ಅವನು 'ಇಂಥವನು' ಎಂದು ಯಾವ
> ಮಾತಿನಿಂದಲೂ ತಿಳಿಸುವದಕ್ಕೆ ಆಗುವಂತಿಲ್ಲ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಯಾವದೂ
> ಇಲ್ಲದ್ದರಿಂದ ಆತನನ್ನು ಶೋತೃ, ತ್ವಕ್ಕು, ಕಣ್ಣು, ಜಿಹ್ವ, ಘ್ರಾಣ - ಎಂಬ
> ಜ್ಞಾನೇಂದ್ರಿಯಗಳಿಂದಲೂ ಅರಿಯುವದಕ್ಕೆ ಆಗುವಂತಿಲ್ಲ ; ಇದೇ ಕಾರಣದಿಂದ ಆತನನ್ನು
> ಮನಸ್ಸಿನಿಂದ ಚಿಂತಿಸಿಕೊಳ್ಳುವದಕ್ಕೂ ಬರುವಂತಿಲ್ಲ. ವೇದದಲ್ಲಿ ಹೇಳಿರುವ ಅಗ್ನಿಹೋತ್ರವೇ
> ಮುಂತಾದ ಕರ್ಮಗಳಿಂದ ಸ್ವರ್ಗಾದಿಗಳನ್ನು ಕೂಡ ಪಡೆದುಕೊಳ್ಳಬಹುದೆಂದು ಶಾಸ್ತ್ರಪ್ರಮಾಣವಿದೆ.
> ಆದರೆ
> ಪರಮಾತ್ಮನ ಪರಮಾರ್ಥ ರೂಪವನ್ನು ಯಾವ ಕರ್ಮದಿಂದಲೂ ಪಡೆಯುವದಕ್ಕೆ ಆಗುವಂತಿಲ್ಲ. ಏಕೆಂದರೆ
> ಅವನು ಸಾಧಕರಿಂದ ಬೇರೆಯಾಗಿದ್ದು ಪಡೆಯುವದಕ್ಕೆ ಯೋಗ್ಯವಾಗಿ ದೂರದಲ್ಲಿರುವ ವಸ್ತುವಲ್ಲ.
> ತಪಸ್ಸಿನಿಂದ ಅನೇಕ ಮಹಾಫಲಗಳು ಸಿದ್ಧಿಸುವವೆಂದು ಶಾಸ್ತ್ರಪ್ರಸಿದ್ಧಿಯಿದೆ. ಆದರೆ ನಿತ್ಯ
> ಸಿದ್ದನಾಗಿರುವ ಪರಮಾತ್ಮನನ್ನು ತಪಸ್ಸಿನಿಂದಲೂ ಕಂಡುಕೊಳ್ಳುವದಕ್ಕೆ ಆಗುವಂತಿಲ್ಲ.
> ಯಜ್ಞದಾನತಪಸ್ಸುಗಳೆಂಬ ಶಾಸ್ತ್ರಕರ್ಮಗಳಿಗೆ ಫಲವೇ ಇಲ್ಲವೆಂದಲ್ಲ ; ಅವುಗಳಿಂದ ನೇರಾಗಿ
> ಪರಮಾತ್ಮನನ್ನು ಕಂಡುಕೊಳ್ಳುವದು ಮಾತ್ರ ಎಂದಿಗೂ ಆಗಲಾರದು.
>
> ಹಾಗಾದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿರುವ ಪರಮಾತ್ಮದರ್ಶನಸಾಧನವು ಯಾವದು ? ಎಂದು
> ಯಾರಾದರೂ ಕೇಳಬಹುದು. ಪರಮಾತ್ಮನೆಂದರೆ ನಮ್ಮೆಲ್ಲರಲ್ಲಿಯೂ ತೀರಾ ಒಳಗಿರುವ ನಿಜವಾದ
> ಸರ್ವಾತ್ಮನು. ನಾವು ತಪ್ಪು ತಿಳಿವಳಿಕೆಯಿಂದ 'ನಾನು', 'ನಾನು' - ಎಂದು ಭಾವಿಸಿಕೊಂಡಿರುವ
> ಮಿಥ್ಯಾತ್ಮರೆಲ್ಲರಿಗಿಂತಲೂ ಬೇರೆಯಾಗಿ ಇವರೆಲ್ಲರನ್ನೂ ವ್ಯಾಪಿಸಿಕೊಂಡಿರುವದರಿಂದ ಅವನಿಗೆ
> 'ಪರಮಾತ್ಮನು' ಎಂದು ಹೆಸರು. ಆ ಪರಮಾತ್ಮನ ಚೈತನ್ಯರೂಪವಾದ ಅನುಭವದಿಂದಲೇ ನಾವು ಮನಸ್ಸನ್ನೂ
> ಇಂದ್ರಿಯಗಳನ್ನೂ ಅರಿತುಕೊಳ್ಳುತ್ತಿರುವೆವು. ಆತನ ಪ್ರಭಾವದಿಂದಲೇ ಮನಸ್ಸು ಇಂದ್ರಿಯಗಳೂ
> ತಮ್ಮ ತಮ್ಮ ವಿಷಯಗಳನ್ನು ಬೆಳಗಿ ತೋರಿಸುತ್ತಿರುವವು.
>
> ನಮ್ಮ ಅಂತಃಕರಣವು ಈಗ್ಗೆ ಹೊರಗಿನ ವಿಷಯಗಳ ರಾಗದ್ವೇಷಗಳಿಂದ
> ಕಲ್ಮಷಯುಕ್ತವಾಗಿಬಿಟ್ಟಿರುತ್ತದೆ ; ಆದ್ದರಿಂದಲೇ ಅದಕ್ಕೆ ಸಂಬಂಧಪಟ್ಟಿರುವ ವಿಷಯಗಳನ್ನು
> ತಿಳಿಯಿಸುವ ಶಕ್ತಿಯಿದ್ದರೂ ತೀರಾ ಹತ್ತಿರವಿರುವ ಪರಮಾತ್ಮನನ್ನು ಕೂಡ ತಿಳಿಯಿಸಿಕೊಡುವ
> ಶಕ್ತಿ ಇರುವದಿಲ್ಲ. ಕನ್ನಡಿಯನ್ನು ಸ್ವಚ್ಛಗೊಳಿಸಿದರೆ, ಅಥವಾ ಚಂಚಲವಾಗಿರುವ ನೀರು
> ಸ್ತಿಮಿತವಾಗಿ ನಿಲುಗಡೆಯನ್ನು ಹೊಂದಿದರೆ, ಅದರಲ್ಲಿ ಹೇಗೆ ಸೂರ್ಯಾದಿಗಳ ಪ್ರತಿಬಿಂಬವು
> ಬೀಳುವದೋ ಹಾಗೆಯೇ ಮನಸ್ಸನ್ನು ಹೊರಗಿನ ವಿಷಯಗಳಿಂದ ಹಿಮ್ಮೆಟ್ಟಿಸಿ ಒಳಕ್ಕೆ ಹಾಯಿಸಿದರೆ,
> ಏಕಾಗ್ರವಾಗಿಸಿ ಆತ್ಮನನ್ನು ಕಾಣುವ ಪ್ರಯತ್ನವನ್ನು ಮಾಡಿದರೆ ಆ ಪರಮಾತ್ಮನ ಪ್ರತಿಚ್ಛಾಯೆಯು
> ಮನಸ್ಸಿನಲ್ಲಿ ಬೀಳುವದು. ಆಗ ಆ ಮನಸ್ಸು ತನ್ನ ಮನಸ್ತ್ವವನ್ನು ಬಿಟ್ಟು ಪರಮಾತ್ಮನಲ್ಲಿಯೇ
> ಮುಳುಗಿ ಪರಮಾತ್ಮನೇ ಆಗಿಬಿಡುವದು. ಈ ಧ್ಯಾನಯೋಗದಿಂದ ಪರಮಾತ್ಮನನ್ನು ಕಂಡುಕೊಳ್ಳಬಹುದು.
>
> ಪರಮಾತ್ಮದರ್ಶನವೆಂದರೆ ಯಾವುದಾದರೊಂದು ಕರಣದಿಂದ ಆತನನ್ನು ವಿಷಯೀಕರಿಸಿಕೊಂಡು ಅರಿಯುವದಲ್ಲ
> ; ಎಲ್ಲವನ್ನೂ ವ್ಯಾಪಿಸಿಕೊಂಡಿರುವ ನಿರವಯವನಾದ ಆ ಸರ್ವಸಾಕ್ಷಿಯನ್ನು ಹೇಗೆ, ಏತರಿಂದತಾನೆ,
> ಅರಿಯಲಾದೀತು ? ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಧ್ಯಾನಿಸಿದಾಗ ಅದು ಪರಮಾತ್ಮ ರೂಪವನ್ನು
> ಹೊಂದುವದು ; ಆಗ ದೊರಕುವ ವಿಲಕ್ಷಣಾನುಭವವೇ ಆತ್ಮದರ್ಶನವು.
>
> --
> You received this message because you are subscribed to the Google Groups
> "advaitin" group.
> To unsubscribe from this group and stop receiving emails from it, send an
> email to advaitin+unsubscribe at googlegroups.com.
> To view this discussion visit
> https://groups.google.com/d/msgid/advaitin/CAKk0Te2r%2BUFG_YD-w6d69QGVu__S260974fD-aOkCb3uzZ3WuA%40mail.gmail.com
> <https://groups.google.com/d/msgid/advaitin/CAKk0Te2r%2BUFG_YD-w6d69QGVu__S260974fD-aOkCb3uzZ3WuA%40mail.gmail.com?utm_medium=email&utm_source=footer>
> .
>
More information about the Advaita-l mailing list